ಶೈಕ್ಷಣಿಕ ಚಟುವಟಿಕೆಗಳ ವೀಕ್ಷಣೆ – ಮುಖ್ಯೋಪಾಧ್ಯಾಯರಿಂದ ಆತ್ಮೀಯ ಸನ್ಮಾನ

ಯಡ್ರಾಮಿ: ಪಟ್ಟಣದ ಮೌಲಾನಾ ಆಜಾದ್ ಶಾಲೆಗೆ ಜೆಡಿಎಸ್ ಮುಖಂಡ ಅಮೀರ ಪಟೇಲ್ ಚಿಂಚೋಳಿ ಅವರು ಅನೌಪಚಾರಿಕವಾಗಿ ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ವ್ಯವಸ್ಥೆ, ಮೂಲಸೌಕರ್ಯ ಹಾಗೂ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿದರು.
ಶಿಕ್ಷಣ ಕ್ಷೇತ್ರದ ಬಗ್ಗೆ ಅವರಿಗಿರುವ ಕಾಳಜಿ ಹಾಗೂ ಸಮಾಜಮುಖಿ ಸೇವೆಯನ್ನು ಮೆಚ್ಚಿದ ಶಾಲೆಯ ಮುಖ್ಯೋಪಾಧ್ಯಾಯರು ಅಮೀರ ಪಟೇಲ್ ಅವರನ್ನು ಶಾಲೆಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರು, “ಶಿಕ್ಷಣದ ಅಭಿವೃದ್ಧಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ನಿಮ್ಮಂತಹ ಶಿಕ್ಷಣ ಚಿಂತಕರು ಹಾಗೂ ಮಾರ್ಗದರ್ಶಕರ ಭೇಟಿ ನಮಗೆ ಹೊಸ ಉತ್ಸಾಹ ನೀಡಿದೆ. ಸಮಾಜ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಮಾರ್ಗದರ್ಶನ ಅಗತ್ಯವಾಗಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲೆಗೆ ಭೇಟಿ ನೀಡಿದ ಅಮೀರ ಪಟೇಲ್ ಅವರಿಗೆ ವಿಶೇಷ ಧನ್ಯವಾದಗಳನ್ನೂ ಸಲ್ಲಿಸಿದರು.
ಅಮೀರ ಪಟೇಲ್ ಚಿಂಚೋಳಿ ಮಾತನಾಡಿ, “ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಅಡಿಪಾಯ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯಗಳು ದೊರೆಯುವಂತೆ ಎಲ್ಲರೂ ಕೈಜೋಡಿಸಬೇಕು,” ಎಂದು ಕರೆ ನೀಡಿದರು.
ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅಮೀರ ಪಟೇಲ್ ಚಿಂಚೋಳಿ ಅವರು ಶಿಕ್ಷಣ ಕ್ಷೇತ್ರದ ಜೊತೆಗೆ ಕಷ್ಟದಲ್ಲಿರುವ ಬಡಜನರ ಪರವಾಗಿ ನಿರಂತರವಾಗಿ ಧ್ವನಿಯಾಗುತ್ತಿದ್ದು, ಜನಪರ ಸೇವೆಯ ಮೂಲಕ ಸ್ಥಳೀಯ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಇದೇ ಕಾರಣದಿಂದ ಅವರು ‘ಯುವಕರ ಆಶಾಕಿರಣ’ ಎಂಬ ಹೆಸರಿನಿಂದ ಜನಮನ್ನಣೆ ಗಳಿಸಿದ್ದಾರೆ.
