
ಚಿತ್ರದುರ್ಗ: ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಚಿತ್ರದುರ್ಗ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವು ಪೈಲೆಟ್ ನಾಗರಾಜ್ ಅವರ ಸಾರಥ್ಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರಾದ ಮಾಂತೇಶ್, ದ್ವಾರ್ಕನಾಥ್, ಗಿರೀಶ್, ಚಂದ್ರಣ್ಣ ಮಲ್ಲಾಪುರ ಸೇರಿದಂತೆ ಚಿತ್ರದುರ್ಗ ತಾಲೂಕಿನ ಅನೇಕ ಛಾಯಾಗ್ರಾಹಕರು ಭಾಗವಹಿಸಿದರು.
ಛಾಯಾಗ್ರಾಹಕರು ಸಮಾಜದ ಪ್ರತಿಯೊಂದು ಘಟನೆ, ಸಂಸ್ಕೃತಿ, ಇತಿಹಾಸ ಹಾಗೂ ಜನಜೀವನವನ್ನು ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವಿಶ್ವ ಛಾಯಾಗ್ರಾಹಕರ ದಿನದ ಮಹತ್ವದ ಕುರಿತು ಚರ್ಚೆ ನಡೆಸಿ, ಛಾಯಾಗ್ರಾಹಕರ ಸೇವೆಯನ್ನು ಸ್ಮರಿಸಲಾಯಿತು. ಅಲ್ಲದೆ ವೃತ್ತಿಯಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ವರದಿ : ಶ್ರೇಯಸ್. ಎಸ್ ಚಿತ್ರದುರ್ಗ
